LYRICS: HAMSALEKHA
ಸಾಹಿತ್ಯ: ಹಂಸಲೇಖ
MUSIC: HAMSALEKHA
ಸಂಗೀತ: ಹಂಸಲೇಖ
SINGERS: HARIHARAN, CHAITRA
ಗಾಯನ: ಹರಿಹರನ್, ಚಿತ್ರ
ಕಡಲೋ ಕಡಲೋ ಕಣ್ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ಬದುಕಿಸು
ನುಡಿಮುತ್ತು ಉದಿರಿಸ ಬೇಡ
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು.. ಅರೆ ಸಾಕು.. ಆ ನಗುವಾ ಬಿಸಾಕು
ಕಡಲೋ ಕಡಲೋ ಕಣ್ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ಬದುಕಿಸು
ನುಡಿಮುತ್ತು ಉದುರಿಸ ಬೇಡ
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು.. ಅರೆ ಸಾಕು.. ಆ ನಗುವಾ ಬಿಸಾಕು
ಮನದ ಬನದ ಒಂಟಿ ಮರದ ಆಸೆ ರೆಂಬೆಗೆ
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ
ಒಳಗೆ ಚಿಗುರು ಹೊರಗೆ ಸಿಬಿರು ನನ್ನ ಆಸೆಗೆ
ಆತುರ ಕಾಣೆ ಅವಸರ ಕಾಣೆ ಯಾಕೀ ಪ್ರೀತಿಗೆ
ನಾನು ಹೆಣ್ಣೇ ಕಾಣದೇ
ನನಗು ಒಂದು ಮನಸಿದೆ
ತುಟಿಗಳು ಎರಡು ಭಯದಲಿ ನಿಂತು ಬಿಗಿಯಿತು ಬೀಗಗಳ
ನುಡಿಮುತ್ತು ಉದುರಿಸಬೇಡ
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು.. ಅರೆ ಸಾಕು.. ಆ ನಗುವಾ ಬಿಸಾಕು
ಕಡಲೋ ಕಡಲೋ ಕಣ್ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ಬದುಕಿಸು
ಇಂದೋ ನಾಳೆ ನಗುವೇ ನೀನು ಅಂತ ಗೊತ್ತಿದೆ
ನಗದೇ ಇದ್ದರೆ ನನ್ನೀ ಪ್ರಾಣ ಕೊಡಲು ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನಿನ್ನದು
ಎಷ್ಟೇ ಜನುಮ ಆದರೂ ಪಡೆಯೋ ಶಪಥ ನನ್ನದು
ಕಡಲಿಗೆ ಎರಡು ತೀರವಿದೆ
ಮುಗಿಲಿಗೆ ಕೊನೆಯೇ ಕಾಣದಿದೆ
ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ
ಗೆಳತಿಯರನು ಕೇಳಬೇಡ
ಮೇಘದೂತರ ಕಳಿಸಲುಬೇಡ
ನಿನ್ನ ಸಣ್ಣನೆ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಲು
ಅರೆ ಸಾಕು.. ಅರೆ ಸಾಕು.. ಆ ನಗುವಾ ಬಿಸಾಕು
ಕಡಲೋ ಕಡಲೋ ಕಣ್ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೊ
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ಬದುಕಿಸು
No comments:
Post a Comment