Friday, September 15, 2017

SONG: BOMBE AADSONU ಹಾಡು: ಬೊಂಬೆ ಆಡ್ಸೋನು MOVIE:DRAMA ಚಿತ್ರ: ಡ್ರಾಮ

LYRIX: YOGARAJ BHAT
ಸಾಹಿತ್ಯ: ಯೋಗರಾಜ್ ಭಟ್ 
MUSIC & SINGER: V HARIKRISHNA
ಸಂಗೀತ & ಗಾಯನ: ವಿ ಹರಿಕೃಷ್ಣ

 
ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು 
ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು 
ಲಗಾಮು ದೇವರ ಕೈಲಿ ನಾವೇನ್ ಮಾಡಣ 
ಎಲ್ಲಾರು ಮುಖ ಮುಚ್ಕೊಂಡ್ ಡ್ರಾಮ ಆಡಣ 

ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು 

ಇಡ್ಲಿಗೆ ತುದಿ ಯಾವ್ದು ಮುದ್ದೆಗೆ ಬುಡ ಯಾವ್ದು 
ಗುಂಡೀಲಿ ಹೆಣ ಯಾವ್ದು ಹುಂಡೀಲಿ ಹಣ ಯಾವ್ದು 
ಪ್ರೇಮ ಕೇಸರೀ ಬಾತು ಕಾಮ ಖಾರ ಬಾತು 
ಜೀವನ ಚೌ ಚೌ ಆಯ್ತು ಯಾಕೆ ದೂಸ್ರಾ ಮಾತು 
ಉಪ್ಪನ್ನು ತಿಂದ ಮೇಲೆ ಬಿಪಿ ಬರ್ದೇ ಇರ್ತದ 
ಉಪ್ಪಿನಕಾಯ್ ಅಂತ ಲೈಫು ತಿಂದೆ ಇರೋಕಾಯ್ತದಾ 
ನಾಲ್ಗೆನೆ ನಂಕೈಲಿಲ್ಲ ನಾವೇನ್ ಮಾಡಣ
ಅವ್ನು ಬರ್ಕೊತ್ತ ಡೈಲಾಗ್ ಹೇಳಿ ಡ್ರಾಮ ಆಡಣ 

ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು

ಒಂದೊಂದು ಮುಸುಡೀಲು ನೂರೆಂಟು ಕಲರ್ 
ಇಲ್ಲೊಬ್ಬ ಸೂಪರ್ ಅಲ್ಲೊಬ್ಬ ಲಫರ್
ಲೋಕದ ಮೆಟಡೋರು ಓಡಿಸುತ್ತಾ ದೇವ್ರು 
ಸುಸ್ತಾಗಿ ಮಾಲ್ಗವ್ನೆ ಯಾರಪ್ಪ ಎಬ್ಸೋರು 
ಯಾವನೋ ಬಿಟ್ಟು ಹೋದ ಹಳೆ ಚಪ್ಲಿ ಈ ಬಾಳು 
ಹಾಕ್ಕೊಂಡು ಹೋಗು ಮಗನೆ ನಿಲ್ಲ ಬೇಡ ನೀನೆಲ್ಲೂ 
ಭಗವಂತ ರೋಡಲ್ ಸಿಕ್ರೆ ನಾವೇನ್ ಮಾಡಣ 
ಅವನೀಗು ಬಣ್ಣ ಹಚ್ಚಿ ಡ್ರಾಮ ಆಡಣ 

ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು 
ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು 

ದೇಹನೆ ಟೆಂಪರ್ವರಿ ನಾವೇನ್ ಮಾಡಣ 
ಮಣ್ಣಲ್ಲಿ ಹೋಗೋಗಂಟ ಡ್ರಾಮ ಆಡಣ 

No comments:

Post a Comment