Friday, September 15, 2017

SONG: BOMBE AADSONU ಹಾಡು: ಬೊಂಬೆ ಆಡ್ಸೋನು MOVIE:DRAMA ಚಿತ್ರ: ಡ್ರಾಮ

LYRIX: YOGARAJ BHAT
ಸಾಹಿತ್ಯ: ಯೋಗರಾಜ್ ಭಟ್ 
MUSIC & SINGER: V HARIKRISHNA
ಸಂಗೀತ & ಗಾಯನ: ವಿ ಹರಿಕೃಷ್ಣ

 
ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು 
ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು 
ಲಗಾಮು ದೇವರ ಕೈಲಿ ನಾವೇನ್ ಮಾಡಣ 
ಎಲ್ಲಾರು ಮುಖ ಮುಚ್ಕೊಂಡ್ ಡ್ರಾಮ ಆಡಣ 

ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು 

ಇಡ್ಲಿಗೆ ತುದಿ ಯಾವ್ದು ಮುದ್ದೆಗೆ ಬುಡ ಯಾವ್ದು 
ಗುಂಡೀಲಿ ಹೆಣ ಯಾವ್ದು ಹುಂಡೀಲಿ ಹಣ ಯಾವ್ದು 
ಪ್ರೇಮ ಕೇಸರೀ ಬಾತು ಕಾಮ ಖಾರ ಬಾತು 
ಜೀವನ ಚೌ ಚೌ ಆಯ್ತು ಯಾಕೆ ದೂಸ್ರಾ ಮಾತು 
ಉಪ್ಪನ್ನು ತಿಂದ ಮೇಲೆ ಬಿಪಿ ಬರ್ದೇ ಇರ್ತದ 
ಉಪ್ಪಿನಕಾಯ್ ಅಂತ ಲೈಫು ತಿಂದೆ ಇರೋಕಾಯ್ತದಾ 
ನಾಲ್ಗೆನೆ ನಂಕೈಲಿಲ್ಲ ನಾವೇನ್ ಮಾಡಣ
ಅವ್ನು ಬರ್ಕೊತ್ತ ಡೈಲಾಗ್ ಹೇಳಿ ಡ್ರಾಮ ಆಡಣ 

ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು

ಒಂದೊಂದು ಮುಸುಡೀಲು ನೂರೆಂಟು ಕಲರ್ 
ಇಲ್ಲೊಬ್ಬ ಸೂಪರ್ ಅಲ್ಲೊಬ್ಬ ಲಫರ್
ಲೋಕದ ಮೆಟಡೋರು ಓಡಿಸುತ್ತಾ ದೇವ್ರು 
ಸುಸ್ತಾಗಿ ಮಾಲ್ಗವ್ನೆ ಯಾರಪ್ಪ ಎಬ್ಸೋರು 
ಯಾವನೋ ಬಿಟ್ಟು ಹೋದ ಹಳೆ ಚಪ್ಲಿ ಈ ಬಾಳು 
ಹಾಕ್ಕೊಂಡು ಹೋಗು ಮಗನೆ ನಿಲ್ಲ ಬೇಡ ನೀನೆಲ್ಲೂ 
ಭಗವಂತ ರೋಡಲ್ ಸಿಕ್ರೆ ನಾವೇನ್ ಮಾಡಣ 
ಅವನೀಗು ಬಣ್ಣ ಹಚ್ಚಿ ಡ್ರಾಮ ಆಡಣ 

ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು 
ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ 
ನಮ್ಗೆ ನಿಮಗೆ ಯಾಕೆ ಟೆನ್ಸನ್ನು 

ದೇಹನೆ ಟೆಂಪರ್ವರಿ ನಾವೇನ್ ಮಾಡಣ 
ಮಣ್ಣಲ್ಲಿ ಹೋಗೋಗಂಟ ಡ್ರಾಮ ಆಡಣ 

Saturday, September 2, 2017

SONG : KADALO KADALO KAN KADALO ಹಾಡು :ಕಡಲೋ ಕಡಲೋ ಕಣ್ ಕಡಲೋ MOVIE : AK 47 ಚಿತ್ರ : ಎ ಕೆ 47












LYRICS: HAMSALEKHA                                           

ಸಾಹಿತ್ಯ: ಹಂಸಲೇಖ 
MUSIC: HAMSALEKHA
ಸಂಗೀತ: ಹಂಸಲೇಖ
SINGERS: HARIHARAN, CHAITRA 
ಗಾಯನ: ಹರಿಹರನ್, ಚಿತ್ರ 


ಕಡಲೋ ಕಡಲೋ ಕಣ್ ಕಡಲೋ 
ಮುಗಿಲೋ ಮುಗಿಲೋ ಮನ ಮುಗಿಲೋ 
ಕಡಲಲ್ಲೋ  ಮುಗಿಲಲ್ಲೋ ನೀ ನನ್ನ ತೇಲಿಸು 
ಕಡಲಲ್ಲೋ  ಮುಗಿಲಲ್ಲೋ  ನೀ ನನ್ನ ಬದುಕಿಸು

ನುಡಿಮುತ್ತು ಉದಿರಿಸ ಬೇಡ
ಪ್ರೇಮ ಪತ್ರ ರವಾನಿಸಬೇಡ 
ನಿನ್ನ ಮುದ್ದಿನ ನಗುವೇ ಸಾಕು 
ಆ ನಗುವಲಿ ಒಪ್ಪಿಗೆ ಹಾಕು  
ಅರೆ ಸಾಕು.. ಅರೆ ಸಾಕು.. ಆ ನಗುವಾ ಬಿಸಾಕು

ಕಡಲೋ ಕಡಲೋ ಕಣ್ ಕಡಲೋ 
ಮುಗಿಲೋ ಮುಗಿಲೋ ಮನ ಮುಗಿಲೋ 
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು 
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ಬದುಕಿಸು 

ನುಡಿಮುತ್ತು ಉದುರಿಸ ಬೇಡ 
ಪ್ರೇಮ ಪತ್ರ ರವಾನಿಸಬೇಡ 
ನಿನ್ನ ಮುದ್ದಿನ ನಗುವೇ ಸಾಕು 
ಆ ನಗುವಲಿ  ಒಪ್ಪಿಗೆ ಹಾಕು 
ಅರೆ ಸಾಕು.. ಅರೆ ಸಾಕು.. ಆ ನಗುವಾ ಬಿಸಾಕು

ಮನದ ಬನದ ಒಂಟಿ ಮರದ ಆಸೆ ರೆಂಬೆಗೆ 
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ 
ಒಳಗೆ ಚಿಗುರು ಹೊರಗೆ ಸಿಬಿರು ನನ್ನ ಆಸೆಗೆ 
ಆತುರ ಕಾಣೆ ಅವಸರ ಕಾಣೆ ಯಾಕೀ ಪ್ರೀತಿಗೆ 
ನಾನು ಹೆಣ್ಣೇ ಕಾಣದೇ 
ನನಗು ಒಂದು ಮನಸಿದೆ 
ತುಟಿಗಳು ಎರಡು ಭಯದಲಿ ನಿಂತು ಬಿಗಿಯಿತು ಬೀಗಗಳ 

ನುಡಿಮುತ್ತು ಉದುರಿಸಬೇಡ 
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೇ ಸಾಕು 
ಆ ನಗುವಲಿ  ಒಪ್ಪಿಗೆ ಹಾಕು 
ಅರೆ ಸಾಕು.. ಅರೆ ಸಾಕು.. ಆ ನಗುವಾ ಬಿಸಾಕು 
ಕಡಲೋ ಕಡಲೋ ಕಣ್ ಕಡಲೋ 
ಮುಗಿಲೋ ಮುಗಿಲೋ ಮನ ಮುಗಿಲೋ 
ಕಡಲಲ್ಲೋ ಮುಗಿಲಲ್ಲೋ  ನೀ ನನ್ನ ತೇಲಿಸು 
ಕಡಲಲ್ಲೋ ಮುಗಿಲಲ್ಲೋ ನೀ  ನನ್ನ ಬದುಕಿಸು 

ಇಂದೋ ನಾಳೆ ನಗುವೇ ನೀನು ಅಂತ ಗೊತ್ತಿದೆ 
ನಗದೇ ಇದ್ದರೆ  ನನ್ನೀ ಪ್ರಾಣ ಕೊಡಲು ಗೊತ್ತಿದೆ 
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನಿನ್ನದು 
ಎಷ್ಟೇ ಜನುಮ ಆದರೂ ಪಡೆಯೋ ಶಪಥ ನನ್ನದು 
ಕಡಲಿಗೆ ಎರಡು ತೀರವಿದೆ 
ಮುಗಿಲಿಗೆ ಕೊನೆಯೇ ಕಾಣದಿದೆ 
ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ 
ಗೆಳತಿಯರನು ಕೇಳಬೇಡ 
ಮೇಘದೂತರ ಕಳಿಸಲುಬೇಡ  
ನಿನ್ನ ಸಣ್ಣನೆ ನಗುವೇ ಸಾಕು 
ಆ ನಗುವಲಿ  ಒಪ್ಪಿಗೆ ಹಾಲು 
ಅರೆ ಸಾಕು.. ಅರೆ ಸಾಕು.. ಆ ನಗುವಾ ಬಿಸಾಕು 
ಕಡಲೋ ಕಡಲೋ ಕಣ್ ಕಡಲೋ 
ಮುಗಿಲೋ ಮುಗಿಲೋ ಮನ ಮುಗಿಲೊ 
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು 
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ಬದುಕಿಸು